ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಫೋಟೋಸ್ ವೀಕ್ಷಿಸುತ್ತಾ, ಫ್ರೆಂಡ್ಸ್ ಜೊತೆ ಚಾಟಿಂಗ್ ಮಾಡುತ್ತ, ಮೇಲ್ಸ್ ನೋಡುತ್ತಾ, YouTube ವೀಡಿಯೋಸ್ ಗಳನ್ನೂ ಪ್ಲೇ ಬ್ಯಾಕ್ ನಲ್ಲಿ ಪ್ಲೇ ಮಾಡುವಂತಿದ್ದರೆ...? ನಿಮ್ಮ ಫೋನ್ ಸ್ಕ್ರೀನ್ ಅನ್ನು ಲಾಕ್ ಮಾಡಿ YouTube ವೀಡಿಯೋಸ್ ಗಳನ್ನೂ ಪ್ಲೇ ಬ್ಯಾಕ್ ನಲ್ಲೂ ಕೂಡ ಪ್ಲೇ ಮಾಡಬಹುದು.
ಕೆಲವು ವರ್ಷಗಳ ಹಿಂದೆ PlayStore ನಲ್ಲಿ uListen ಮತ್ತು SuperTube ಎಂಬ ಅಪ್ಲಿಕೇಶನ್ ಲಾಂಚ್ ಮಾಡಲಾಗಿತ್ತು ಆದರೆ ಅವು YouTube ನ ವೀಡಿಯೋಸ್ ಗಳನ್ನೂ ಪ್ಲೇ ಬ್ಯಾಕ್ ನಲ್ಲಿ ಪ್ಲೇ ಮಾಡುವಲ್ಲಿ ವಿಫಲವಾಯಿತು. ಆದರೆ Google Chrome ನ ಈ ಸೆಟ್ಟಿಂಗ್ ನಿಮಗೆ YouTube ವೀಡಿಯೋಸ್ ಗಳನ್ನೂ ಪ್ಲೇ ಬ್ಯಾಕ್ ನಲ್ಲಿ ಪ್ಲೇ ಮಾಡಲು ನೆರವಾಗುತ್ತದೆ.
ಏನದು Google Chrome ನ ಆ ಸರಳ ಸೆಟ್ಟಿಂಗ್...?
1. Google Chrome ಅನ್ನು ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಓಪನ್ ಮಾಡಿಕೊಳ್ಳಿ.
2. ನಂತರ YouTube.com ಓಪನ್ ಮಾಡಿ.
3. ನಿಮ್ಮ ಬ್ರೌಸರ್ ನ ಮೆನು ನಲ್ಲಿ ಹೋಗಿ ಮೇಲಿನ ಫೋಟೋ ದಲ್ಲಿ ತೋರಿಸಿರುವಂತೆ, ಬ್ರೌಸರ್ ನಲ್ಲಿನ ಡೆಸ್ಕ್ಟಾಪ್ ಸೈಟ್ ( Desktop Site ) ಅನ್ನು ಆಯ್ಕೆ ಮಾಡಿಕೊಳ್ಳಿ.
4. YouTube ನಲ್ಲಿ ನಿಮ್ಮ ನೆಚ್ಚಿನ ವೀಡಿಯೋ ಒಂದನ್ನು ಪ್ಲೇ ಮಾಡಿಕೊಳ್ಳಿ, ನಿಮ್ಮ ಮೊಬೈಲ್ ನ ಮಿನಿಮೈಸ್ ಕೀ ಅಥವಾ ಸೆಂಟರ್ ಕೀ ಅನ್ನು ಒತ್ತಿ.
5. ಆಗ ಪ್ಲೇ ಬ್ಯಾಕ್ ಸ್ಟಾಪ್ ಆಗುತ್ತದೆ, ಆವಾಗ ನಿಮ್ಮ ಮೊಬೈಲ್ ನ ನೋಟಿಫಿಕೇಶನ್ ಬಾರ್ ಅನ್ನು ಡ್ರ್ಯಾಗ್ ಮಾಡಿ ಮತ್ತು ನಿಮ್ಮ ಪ್ಲೇ ಬ್ಯಾಕ್ ಅನ್ನು ರೆಸೂಮ್ ಮಾಡಿ.
YouTube ನ ಈ ಪ್ಲೇ ಬ್ಯಾಕ್ ಕೇವಲ ಆಡಿಯೋ ಪ್ಲೇ ಬ್ಯಾಕ್ ಮಾತ್ರ ಆಗಿದೆ.
